
ಜೀವನದ ಆಸೆಗಳ ಕನಸು
ಅದಾಗಬೇಕಾದರೆ ನನಸು
ನಿನ್ನ ಕಲ್ಪನೆಯ ಹಾಡನ್ನು ಗುನುಗುನಿಸು
ಗುನುಗುನಿಸುತ ನಿನ್ನ ಜೀವನ ಸವೆಸು
ತೋರದಿರು ಎಂದೂ ನೀ ಹುಸಿ ಮುನಿಸು
ಆ ಮುನಿಸಿಗೆ ಜಾಗ ಕೊಡದಿರಲಿ ನಿನ್ನ ಮನಸು
ಮನಸಿನಾಳದ ಪ್ರೀತಿಯ ವ್ಯಕ್ತಪಡಿಸು
ವ್ಯಕ್ತಪಡಿಸಿದ ವ್ಯಕ್ತಿಯ ಪ್ರೀತಿಸು
ಪ್ರೀತಿಸಿದ ವ್ಯಕ್ತಿಯ ತಪ್ಪನ್ನು ಮನ್ನಿಸು
ಮನ್ನಣೆಗೆ ಸಿಕ್ಕ ಪ್ರೀತಿಯ ಅರಸು
ನೀ ಅರಸಿ ಹೋರಾಟ ದಾರಿ ಸುಖವಾಗಿರಲೆಂದು ಹಾರೈಸು
ಇದೇ ನನ್ನ ಕನಸು
ಅದಾಗಲಿ ಬೃಹತ್ ನನಸು
ಅದರ ಚಂದ ಸವಿಯಲು ಬಲು ಸೊಗಸು....
ಅದಾಗಬೇಕಾದರೆ ನನಸು
ನಿನ್ನ ಕಲ್ಪನೆಯ ಹಾಡನ್ನು ಗುನುಗುನಿಸು
ಗುನುಗುನಿಸುತ ನಿನ್ನ ಜೀವನ ಸವೆಸು
ತೋರದಿರು ಎಂದೂ ನೀ ಹುಸಿ ಮುನಿಸು
ಆ ಮುನಿಸಿಗೆ ಜಾಗ ಕೊಡದಿರಲಿ ನಿನ್ನ ಮನಸು
ಮನಸಿನಾಳದ ಪ್ರೀತಿಯ ವ್ಯಕ್ತಪಡಿಸು
ವ್ಯಕ್ತಪಡಿಸಿದ ವ್ಯಕ್ತಿಯ ಪ್ರೀತಿಸು
ಪ್ರೀತಿಸಿದ ವ್ಯಕ್ತಿಯ ತಪ್ಪನ್ನು ಮನ್ನಿಸು
ಮನ್ನಣೆಗೆ ಸಿಕ್ಕ ಪ್ರೀತಿಯ ಅರಸು
ನೀ ಅರಸಿ ಹೋರಾಟ ದಾರಿ ಸುಖವಾಗಿರಲೆಂದು ಹಾರೈಸು
ಇದೇ ನನ್ನ ಕನಸು
ಅದಾಗಲಿ ಬೃಹತ್ ನನಸು
ಅದರ ಚಂದ ಸವಿಯಲು ಬಲು ಸೊಗಸು....
ಒಟ್ಟಿನಲ್ಲಿ ಒಮ್ಮೆ ಈ ಕವನ ಓದಿ ಮುಗಿಸು !
ReplyDeleteಚೆನ್ನಾಗಿದೆ ..ಒಳ್ಳೆಯ ಪ್ರಯತ್ನ ..ಇನ್ನಷ್ಟು ಬರೆಯಿರಿ..
ಬಲು ಸೊಗಸು....!
ReplyDelete