
ದೇಶದ ಗಡಿ ಕಾಯುವ ಸೈನಿಕ
ಮನೆಯಿಂದ ದೂರವಿದ್ದು ಮಾನಸಿಕ
ಹಿಂಸೆಯ ಅನುಭವಿಸುವೆ ದೈನಿಕ
ನಿನ್ನ ಸಂಚಾರ ವೈಮಾನಿಕ
ರಕ್ಷಿಸುವೆ ನಮ್ಮನ್ನು ಕೊನೆ ತನಕ
ಊರಿಂದ ಬಂದರೆ ಒಂದು ಕಾಗದದ ತುಣುಕ
ಹೇಳಲಾಗದು ನಿನ್ನ ಮನದ ತವಕ
ಯುದ್ಧಭೀತಿಯೆಂಬ ಕಷ್ಟಗಳು ಅನೇಕ
ಆದರು ಅವುಗಳ ನಡುವೆಯೂ ನೀನು ಭಾವುಕ
ನಿನ್ನ ಭಾವುಕತೆ ಎಂದೂ ಆಗದು ಅತಿರೇಕ
ಏಕೆಂದರೆ ನೀನೊಬ್ಬ ಗಡಿ ಕಾಯುವ ಸೈನಿಕ ...