Thursday, September 23, 2010

ಮಾನವ

ಸೈನಿಕ


ದೇಶದ ಗಡಿ ಕಾಯುವ ಸೈನಿಕ
ಮನೆಯಿಂದ ದೂರವಿದ್ದು ಮಾನಸಿಕ
ಹಿಂಸೆಯ ಅನುಭವಿಸುವೆ ದೈನಿಕ
ನಿನ್ನ ಸಂಚಾರ ವೈಮಾನಿಕ
ರಕ್ಷಿಸುವೆ ನಮ್ಮನ್ನು ಕೊನೆ ತನಕ
ಊರಿಂದ ಬಂದರೆ ಒಂದು ಕಾಗದದ ತುಣುಕ
ಹೇಳಲಾಗದು ನಿನ್ನ ಮನದ ತವಕ
ಯುದ್ಧಭೀತಿಯೆಂಬ ಕಷ್ಟಗಳು ಅನೇಕ
ಆದರು ಅವುಗಳ ನಡುವೆಯೂ ನೀನು ಭಾವುಕ
ನಿನ್ನ ಭಾವುಕತೆ ಎಂದೂ ಆಗದು ಅತಿರೇಕ
ಏಕೆಂದರೆ ನೀನೊಬ್ಬ ಗಡಿ ಕಾಯುವ ಸೈನಿಕ ...

Tuesday, May 18, 2010

ಕನಸು



ಜೀವನದ ಆಸೆಗಳ ಕನಸು
ಅದಾಗಬೇಕಾದರೆ ನನಸು
ನಿನ್ನ ಕಲ್ಪನೆಯ ಹಾಡನ್ನು ಗುನುಗುನಿಸು
ಗುನುಗುನಿಸುತ ನಿನ್ನ ಜೀವನ ಸವೆಸು
ತೋರದಿರು ಎಂದೂ ನೀ ಹುಸಿ ಮುನಿಸು
ಮುನಿಸಿಗೆ ಜಾಗ ಕೊಡದಿರಲಿ ನಿನ್ನ ಮನಸು
ಮನಸಿನಾಳದ ಪ್ರೀತಿಯ ವ್ಯಕ್ತಪಡಿಸು
ವ್ಯಕ್ತಪಡಿಸಿದ ವ್ಯಕ್ತಿಯ ಪ್ರೀತಿಸು
ಪ್ರೀತಿಸಿದ ವ್ಯಕ್ತಿಯ ತಪ್ಪನ್ನು ಮನ್ನಿಸು
ಮನ್ನಣೆಗೆ ಸಿಕ್ಕ ಪ್ರೀತಿಯ ಅರಸು
ನೀ ಅರಸಿ ಹೋರಾಟ ದಾರಿ ಸುಖವಾಗಿರಲೆಂದು ಹಾರೈಸು
ಇದೇ ನನ್ನ ಕನಸು
ಅದಾಗಲಿ ಬೃಹತ್ ನನಸು
ಅದರ ಚಂದ ಸವಿಯಲು ಬಲು ಸೊಗಸು....

ಜೀವನ....


ಮನುಷ್ಯ ಮನುಷ್ಯನ ಜೀವನ
ಎರಡು ದೋಣಿಗಳ ಮೇಲಿನ ಪಯಣ
ಪಯಣದಲ್ಲಿ ಆಗದಿರಲಿ ಎಂದೂ ಅನುಭವದ ಒಂಟಿತನ
ಏಕೆಂದರೆ ನಿನ್ನ ಪಯಣ ಒಂದು ಸುಧೀರ್ಘ ಗಾಯನ
ಗಾಯನಕ್ಕೆ ಆದರೆ ಬಿರುಗಾಳಿಯ ಆಗಮನ
ಜೀವನ ಪಯಣ ಬಿರುಗಾಳಿಗೆ ಸಿಕ್ಕ ತರಗೆಲೆಯ ಸಂಚಲನ
ಮೇಲೊಬ್ಬ ಗಮನಿಸುತ್ತಿದ್ದಾನೆ ನಮ್ಮೆಲ್ಲರ ಚಲನ ವಲನ
ಸೃಷ್ಟಿಯ ಜೀವಿಗಳನ್ನೆಲ್ಲ ಕಾಣುತ್ತಿದ್ದಾನೆ ಒಂದೇ ಸಮಾನ
ಮನುಷ್ಯ ಸಂಬಂಧಗಳ ವ್ಯವಸ್ಥಿತ ನಿರೂಪಣಾ
ಶೈಲಿಗೆ ಮಾದಬೇಕು ಎಲ್ಲರೂ ಕರತಾಡನ
ಒಂದೇ ಒಂದು ಬಾರಿ ಮಾಡು ಸೃಷ್ಟಿಯ ಅವಲೋಕನ
ಮಾಡುವೆ ನೀ ಅವನಿಗೆ ಮೆಚ್ಚುಗೆಯ ಸನ್ಮಾನ
ನಿರೀಕ್ಷಿಸನು ಎಂದೂ ಪ್ರತಿಫಲದ ಬಹುಮಾನ
ಏನುಂಟು ಅವನಿಗೆ ಸಾಟಿಯಾಗುವ ಉಪಮಾನ...

Thursday, May 13, 2010

ಕವಿಶ್ರೇಷ್ಠ ಕುವೆಂಪು

ರಾಷ್ಟ್ರಕವಿ ಕುವೆಂಪು
ನಿಮ್ಮ ಕವಿತೆ ಬಲು ಇಂಪು
ಅದು ನೀಡುತ್ತದೆ ಮೈಮನಗಳಿಗೆ ತಂಪು
ವಿಶ್ವದೆಲ್ಲೆಡೆ ಹರಡಿದೆ ಅವುಗಳ ಕಂಪು
ಅತೀ ಹೆಚ್ಚು ಪ್ರಶಸ್ತಿ ಪಡೆದ ಕವಿಶ್ರೇಷ್ಠ
ನಿಮ್ಮ ಕವಿತೆಯ ಭಾವ ಬಲು ವಿಶಿಷ್ಟ
ವೈಶಿಷ್ಟ್ಯತೆಯೇ ನಿಮ್ಮನ್ನು ಮಾಡಿದೆ ಕವಿಗಳಲ್ಲೆಲ್ಲ ಸರ್ವಶ್ರೇಷ್ಠ
ಹೆಸರೇನೋ ಕುಪ್ಪಳ್ಳಿ ವೆಂಕಟಪ್ಪನ ಮಗ ಪುಟ್ಟಪ್ಪ
ಆದರೆ ನಿನ್ನ ಕೀರ್ತಿ ಪುಟ್ಟದೇನಪ್ಪ
ನಿಮ್ಮ ಪದಗಳ ಜೋಡಣೆ , ಕವಿತೆಯ ಭಾವಕ್ಕೆ
ನಿಮಗೆ ನೀವೇ ಸಾಟಿ
ಕವಿತೆಗೆ ಶಾರದೆಯು ದನಿಗೂಡಿಸುವಳು ವೀಣೆಯ ಮೀಟಿ
ನಿಮ್ಮ ಜ್ಞಾನ ಭಂಡಾರಕ್ಕೆ ಯಾರುಂಟು ನಿಮಗೆ ಸಾಟಿ........